Tuesday 6 August 2013

ಚಿನ್ನ

ಮರೆಯೆಂದರೆ ಹೇಗೆ ಮರೆಯಲಿ ನಿನ್ನ,
ಅನುಕ್ಷಣವೂ ಕಾಡುತಿರಲು ನಿನ್ನ ನೆನಪೇ ಚಿನ್ನ.

ಬೊಬ್ಬಿಡುತ್ತಿದ್ದರು ಕೇಳದೇ ಹೇಗಿರುವೆ ಒಲವೇ ನೀ ಸುಮ್ಮನೆ,
ನೀ ಇರದೆ ಖಾಲಿ ಖಾಲಿ ಅನಿಸುತ್ತಿದೆ ನನ್ನ ಮನ ಮನೆ.

ನಾ ಕೊಂಚ ಗರ್ವಿಯೂ ಕೋಪಿಷ್ಟನೂ ಹೌದು, ನನಗರಿವಾಗಿದೆ ಅದು ತಪ್ಪು,
ನೋಯಿಸುವುದಿಲ್ಲ ಮುಂದೆಂದೂ ನಿನ್ನ, ದಯಮಾಡಿ ಬಂದೆನ್ನ ಅಪ್ಪು.

ನಿನಗಾಗಿ ಕಾದಿರುವೆ ಹಿಡಿದು ನಿನ್ನಿಷ್ಟದ ಹೂ ಮಲ್ಲಿಗೆ,
ಬಾ ಎನ್ನಾತ್ಮವೆ ಈ ಹೂ ಬಾಡುವುದರೊಳಗೆ ಮೆಲ್ಲಗೆ.

-
ಹರ್ಷ ಹೆಮ್ಮಾಡಿ.

No comments:

Post a Comment