Sunday 29 December 2013

ಒಂದು ಸಾರಿ ಹೇಳಿಬಿಡು

ಅದೇಕೆ ಮಾಡಿದೇ ಚೆಲುವೇ ನೀ ನನ್ನ ಹೃದಯದ ಲೂಟಿ,
ನನ್ನಲ್ಲೀಗ ಮೂಡಿದೆ ಹೇಳಿಕೊಳ್ಳಲಾಗದ ಬಯಕೆಗಳು ಕೋಟಿ.

ಅನಿಸುತ್ತಿದೆ ಯಾಕೋ ಈ ಬದುಕೇ ಅಪೂರ್ಣ ನಿನ್ನ ವಿನಹ,
ಸಿಗುತ್ತಿಲ್ಲ ನನಗೇ ಯಾವುದೇ ಕಾರಣ ಬರಲು ನಿನ್ನ ಸನಿಹ.

ಆಕಾಶವನ್ನೇ ಮುಟ್ಟುವ ಭರವಸೆಯೇನೋ ಇದೆ ನನಗೆ,
ಆದರೆ ಧೈರ್ಯವೇ ಸಾಲುತ್ತಿಲ್ಲ ಹೇಳಲು ನನ್ನಾಸೆ ನಿನಗೆ.

ಬಾ ನನ್ನ ಒಲವೇ ಈ  ಕಣ್ಣಲ್ಲೊಮ್ಮೆ ಕಣ್ಣಿಟ್ಟು ನೋಡು,
ನೀ ನನ್ನವಳೆಂದು ನನಗೊಂದೇ ಒಂದು ಸಾರಿ ಹೇಳಿಬಿಡು.


- ಹರ್ಷ ಹೆಮ್ಮಾಡಿ.

Wednesday 25 December 2013

ಮನದ ಮಾತು

ಕೇಳಿಸುತ್ತಿಲ್ಲವೇನೇ ಹುಡುಗಿ ನನ್ನ ಮನದ ಮಾತು,
ಕೇಳಿಸಿದರೆ ಈಗಲೇ ಓಡಿ ಬಾ ಮಾತಾಡೋಣ ಕೂತು.

ಮೊದಮೊದಲು ನೀ ನನ್ನ ಕನಸಲ್ಲಿ ಮಾತ್ರ ಬರುತ್ತಿದ್ದೆ,
ಈಗ ಆ ಕನಸು ನನಸಾಗಿ ನೀ ಕದ್ದೇ ನನ್ನ ನಿದ್ದೆ.

ಮೊನ್ನೆ ನಿನ್ನೆವರೆಗೂ ನಾವಿಬ್ಬರೂ ಅಪರಿಚಿತರು,
ನಿನ್ನಿಂದು ಕಂಡು ನನ್ನೆದೆಯಲ್ಲಿ ನಿನ್ನದೇ ಕಾರುಬಾರು.

ನನಗ್ಯಾಕೋ ಅನಿಸುತ್ತಿದೆ ನೀನೇ ನನ್ನ ಮನದೊಡತಿ,
ನಿನಗೂ ಅನಿಸಿದರೆ ಹೇಳಿಬಿಡು ನನಗೆ ಒಂದು ಸರತಿ.


- ಹರ್ಷ ಹೆಮ್ಮಾಡಿ.

Friday 20 December 2013

ಹರ್ಷ ಉವಾಚ-೧೧

ನಮಗೆಲ್ಲಾ ತಿಳಿದಿರುವುದು .% ಮಾತ್ರ, ತಿಳಿಯದೇ ಇರುವುದು ೯೯.%. ಅಚ್ಚರಿಯೆನಿಸಿದರೂ ಇದು ನಿಜ.


- ಹರ್ಷ ಹೆಮ್ಮಾಡಿ.

Wednesday 18 December 2013

ಮನದರಸಿ

ನಮ್ಮ ಸಂಬಂಧ ಮುರಿದುಕೊಂಡು ಎರೆಡು ವರ್ಷ ಕಳೆದರೂ,
ನೀ ಕರೆಮಾಡಿದಾಗಲೆಲ್ಲಾ ಒದ್ದೆಯಾಗುತ್ತೆ ಕಣ್ಣು, ಬಿಗಿಗೊಳ್ಳುತ್ತೇ ಉಸಿರು.

ಯಾವ ಚೆಲುವೆಯರ ಕಣ್ಣಲ್ಲೂ ನಿನ್ನ ಕಣ್ಣಲ್ಲಿರೋ ಸೆಳೆತವಿಲ್ಲ,
ನಿನ್ನ ಹೊರತು ಇನ್ಯಾರೂ ಕೂಡ ಇಂದಿಗೂ ನನ್ನ ಮನ ಸೆಳೆಯಲಿಲ್ಲ.

ವಾಸ್ತವತೆ ಇರಲಿ ಕನಸಿನಲ್ಲೂ ನೀನೇ ನನ್ನ ಕಣ್ಣೆದುರು ಬರುವೆ,
ಅಂದು ಇಂದು ಎಂದೆಂದಿಗೂ ಗೆಳತಿ ನೀನೇ ನನ್ನ ಮನಸಿನಲ್ಲಿರುವೆ.

ಅರ್ಥವಾಗುತ್ತಿಲ್ಲ ಯಾಕೆ ನನಗೆ ಶಿಕ್ಷೆ ನನ್ನ ಮನದರಸಿ,
ಬಳಲಿ ಬೆಂಡಾಗಿರುವೆನು ದಿನವೂ ನಾ ನಿನ್ನ ಸೇರಲು ಹವಣಿಸಿ.


- ಹರ್ಷ ಹೆಮ್ಮಾಡಿ.

Saturday 14 December 2013

ಬಯಕೆ

ನೀ ಸನಿಹವಿದ್ದಾಗ ಬಾಯಿಬಿಡದೇ ನಾ ಮೂಕಾದೆ,
ನನ್ನ ಮನದ ಮಾತು ತಿಳಿಯದೇ ನೀ ದೂರಾದೆ.

ಖಾಲಿ ಮನಸ್ಸಲ್ಲಿ ನೀ ಬರೆದೇ ಬಣ್ಣ ಬಣ್ಣದ ಚಿತ್ತಾರ,
ಬಣ್ಣಗಳು ಮಾಸುವ ಮುಂಚೆ ಓಡಿ ಬಾ ನಲ್ಲೆ ಹತ್ತಿರ.

ಸಸಿ ಮನಸ್ಸು ಬೆಳೆದಿದೆ ಇಂದು ಮರದಷ್ಟು ಎತ್ತರ,
ನನ್ನ ಎದುರಿರುವ ಪ್ರಶ್ನೆಗಳಿಗೆಲ್ಲಾ ನೀನೇ ಉತ್ತರ.

ತುಂಬಾ ಮಾತನಾಡುವ ಬಯಕೆ ಮೂಡಿದೆ ಇಂದು,
ಈಗನಿಸುತ್ತಿದೆ ನಾನಂದು ತಪ್ಪು ಮಾಡಿದೆಯೆಂದು.


- ಹರ್ಷ ಹೆಮ್ಮಾಡಿ.

Monday 9 December 2013

ಪ್ರೀತಿಗೆ ಕಣ್ಣಿಲ್ಲ

ಪ್ರೀತಿಗೆ ಕಣ್ಣಿಲ್ಲ ಅನ್ನೋದು ಒಪ್ಪಬಹುದು,
ಆದರೆ ಬಾಯಿದೆ ಕಣ್ರೀ ಬಯ್ಯಬಹುದು.

ಮೊದಮೊದಲು ಕರೀತಾರೆ ಚಿನ್ನ ರನ್ನ,
ದಿನ ಕಳೆದಂತೆ ಅಲ್ಲಿ ಬರೀ ಥೂ ನಿನ್ನ.

ಪ್ರೀತೀಲಿ ನಂಬಿಕೆ ಸದಾ ಇರಬೇಕು,
ಸಂದೇಹ ಮೂಡಿದರೆ ಉಚಿತ ಬಿರುಕು.

ಪ್ರೀತಿಸಲು ಬೇಕು ಸಮಯ ಸಂಯಮ,
ನನಗಂತೂ ಆಗಿಬರೋಲ್ಲ ಈ ನಿಯಮ.


- ಹರ್ಷ ಹೆಮ್ಮಾಡಿ.

Friday 6 December 2013

ಕನ್ನಡಿ

ಯಾರಿಟ್ಟರೋ ಅವಳು ಕಾಣಿಸುವಂತೆ ಆ ಕನ್ನಡಿ,
ನಿರಾಳನಾಗುತ್ತಿದ್ದೆ ನಾನವಳ ಪ್ರತಿಬಿಂಬ ನೋಡಿ.

ಇಲ್ಲದಾಗಲೆಲ್ಲ ಆ ಜಾಗದಲ್ಲಿ ಅವಳ ವಾಸ್ತವತೆ,
ನನಗೆ ಏನೋ ಒಂದು ಕಡಿಮೆಯೆಂಬ ಭಾವುಕತೆ.

ಬೇಜಾರು ನೋಡಲು ಅವಳ ಬಿಂಬವಿಲ್ಲದ ದರ್ಪಣ,
ಜನರಿಲ್ಲದ ಖಾಲಿ ಬೀದಿ ಅನಿಸುವಂತೆ ಬಣ ಬಣ. 

ಕನ್ನಡಿ ಯಾಕೆ ನೀ ಅಂದು ಅವಳನ್ನು ಕಾಣಿಸಿದೆ,
ಇಂದು ನಾ ಚಡಪಡಿಸುತ್ತಿರುವೆ ಅವಳು ಕಾಣಿಸದೆ.


- ಹರ್ಷ ಹೆಮ್ಮಾಡಿ.

Sunday 1 December 2013

ಹರ್ಷ ಉವಾಚ-೧೦

ನಿರೀಕ್ಷೆಯಿಲ್ಲದ ಸಂಬಂಧವಿಲ್ಲ.”

- ಹರ್ಷ ಹೆಮ್ಮಾಡಿ.