Tuesday 6 August 2013

ನಲ್ಲೆ

ನನ್ನ ಮನಸ್ಸಿಗೆ ಪ್ರೀತಿ ಪ್ರೇಮದ ರೆಕ್ಕೆ ಪುಕ್ಕ ಕಟ್ಟಿದವಳು ನೀನು,
ಅದನ್ನೀಗ ನನಗರಿವಿಲ್ಲದಂತೆ ಕತ್ತರಿಸಿ ಹಾರೆಂದರೆ ಹೇಗೆ ಹಾರಲಿ ನಾನು.

ನಲ್ಲೆ ಕಲ್ಲು ಹೃದಯಿ ನೀ, ನನ್ನ ಕೊಲ್ಲಲೆಂದೇ ಬಂದಂತಿದೆ ನೀನು,
ಕಲ್ಲನ್ನು ಬೆಲ್ಲವೆಂದು ಕಡಿದು ಹಲ್ಲು ಮುರಿದುಕೊಂಡಂತಿದೆ ನಾನು.

ಅಬ್ಬರದ ಸಮುದ್ರದಲೆಗಳು ದಡಕ್ಕಪ್ಪಳಿಸಿ ಹೋಗುವಂತೆ,
ಎಲ್ಲಿ ಹೋದೆ ನೀ ಮಾಯವಾಗಿ ಮನದ ತುಂಬಾ ತುಂಬಿ ಚಿಂತೆ.

ಬಯ್ಯಲು ಮನಸಾಗುತ್ತಿಲ್ಲ ನಿನಗೆ, ಸರಿಯಿಲ್ಲವೇನೋ ನನ್ನ ಅದೃಷ್ಟ,
ಅದಕ್ಕೇ ಈಡೇರಲಿಲ್ಲವೇನೋ ನೀ ನನ್ನವಳಾಗಬೇಕೆಂಬ ಅಭೀಷ್ಟ.

-
ಹರ್ಷ ಹೆಮ್ಮಾಡಿ.

No comments:

Post a Comment