Tuesday 6 August 2013

ಮನದನ್ನೆ

ಬರೆಯಬೇಕೆನಿಸುತ್ತಿದೆ ಹೇಗಿರಬೇಕೆಂದು ನನ್ನ ಮನದನ್ನೆ,
ಹಸನ್ಮುಖಿಯಾಗಿರಬೇಕು, ಇರಲೇಬೇಕಂತಿಲ್ಲ ನನ್ನಂತೆ ಗುಳಿಕೆನ್ನೆ.

ಸಧ್ಗುಣವತಿಯು, ಸಹನಶೀಲೆಯೂ ಆಗಿರಬೇಕು ನೀನು,
ತುಸು ಮುಂಗೋಪಿ ನಾ, ತಣಿಯಬೇಕು ನಿನ್ನ ಮುಖ ನೋಡಿ ನಾನು.

ಅತಿಲೋಕ ಸುಂದರಿ ಬೇಕಿಲ್ಲ,ನನ್ನ ಲೋಕಕ್ಕೆ ಸುಂದರಿಯಾಗಿದ್ದರೆ ಸಾಕು,
ನನಗೆ ಬೈದರು ತೊಂದರೆ ಇಲ್ಲ,ನನ್ನ ಹೆತ್ತವರಿಗೆ ಮರ್ಯಾದೆ ಕೊಡಬೇಕು.

ಬೇರೆ ಬೇರೆಯಾಗಿದ್ದರು ಅಡ್ಡಿ ಇಲ್ಲ ನನ್ನ ನಿನ್ನ ಭಾಷೆ,
ಅರ್ಥವಾದರೆ ಸಾಕು ಒಬ್ಬರಿಗೊಬ್ಬರ ಮನದ ಅಭಿಲಾಷೆ.

ಕಡ್ಡಾಯವಾಗಿ ನನಗಿಂತ ಅರ್ಧ ಅಡಿ ಕುಳ್ಳಗಿರಬೇಕು,
ಯಾಕೆಂದರೆ ನನ್ನೆದುರು ನಿಂತು ಬೈದರೆ ನನ್ನ ಕಣ್ಣು ತಪ್ಪಿಸಿಕೊಳ್ಳಬೇಕು.

ಒಮ್ಮೆ ಬಂದು ಮಧ್ಯದಲ್ಲಿಳಿದೊಗಲು ನಾನೇನು ಚಲಿಸುವ ರೈಲಲ್ಲ,
ಬಂದೆಯಂತಾದರೆ ನನ್ನಗಲಿ ಹೋಗಲು ನಿನಗಿಲ್ಲಿ ಅವಕಾಶವಿಲ್ಲ.

ಅಕಸ್ಮಾತ್ ಮೇಲಿರುವವನು ಕರೆದುಕೊಂಡರೆ ನನ್ನನ್ನಿಲ್ಲಿಡಲು ಒಪ್ಪದೆ,
ನೀ ಮರುಮದುವೆಯಾಗಬೇಕು ನಿನಗಗತ್ಯವಿದ್ದರೆ ತಪ್ಪದೆ.

ಖಂಡಿತವಾಗಿಯು ನನಗಿಷ್ಟ ಅವಳಿಗಿದ್ದರೆ ಇಷ್ಟಾದರು ಸಂಗತಿ,
ಇಲ್ಲವಾದರೆ ಬೇಡವೇ ಬೇಡ ನನಗೆ ಈ ಜನ್ಮಕ್ಕೆ ಬಾಳಸಂಗಾತಿ.

-
ಹರ್ಷ ಹೆಮ್ಮಾಡಿ.

No comments:

Post a Comment