Tuesday 6 August 2013

ಪ್ರೀತಿ

ಹಾಲಂತ ಪ್ರೀತಿ ಒಡೆದ ಮೇಲೂ ಮನದ ಮೂಲೆಯಲ್ಲೇನೋ ಕಸಿವಿಸಿ,
ಮತ್ತೆ ಮತ್ತೆ ನಿನ್ನ ಕನವರಿಕೆಯಲ್ಲಿ ಹೆಚ್ಚುತ್ತಿದೆ ನನ್ನುಸಿರಿನ ಬಿಸಿ.

ಹೇಗಾಯ್ತೊ ಕಾಣೆ ನಿನ್ನ ಮನಸ್ಸಿಂದ ನನ್ನ ನೆನಪುಗಳ ವಿಲೇವಾರಿ,
ನಿನಗಾಗಿ ಹಗಲಿರುಳು ಅಲೆದಾಡಿ ನಾನಾಗಿರುವೆನು ಅಲೆಮಾರಿ.

ಪುಣ್ಯ ಮಾಡಿದ್ದವು ಸದಾ ಅಪ್ಪಿಕೊಂಡಿರಲು ನಿನ್ನ ಬಟ್ಟೆ,
ಆ ನಿರ್ಜೀವಿಗಳು ಮಾಡಿದ ಪುಣ್ಯ ನಾ ಮಾಡದೇ ಕೆಟ್ಟೆ.

ನಿತ್ಯ ಸೇವೆ ಮಾಡುವೆ ನನಗೊಂದು ಜಾಗ ಕೊಡು ನಿನ್ನ ಮನದ ಮೂಲೇಲಿ,
ನಿನ್ನ ಪ್ರೀತಿಯೊಂದನ್ನು ಬಿಟ್ಟು ನಾ ಬಯಸುವುದಿಲ್ಲ ಬೇರಾವ ಕೂಲಿ.

-
ಹರ್ಷ ಹೆಮ್ಮಾಡಿ.

No comments:

Post a Comment