Tuesday 6 August 2013

ಒಲವೇ

ಮುನಿಸೇತಕೆ ನನ್ನಲಿ ಒಲವೇ, ನಿನಗೇನು ಮರುಳೆ,
ನಿನ್ನ ಮೊಂಡುತನಕೆ ಕಿತ್ತು ಬರುತಿದೆ ನನ್ನ ಕರುಳೆ.

ಜಾಸ್ತಿ ಹಠ ಬೇಡ ನಲ್ಲೆ ಇಳಿತಿಲ್ಲ ನಿನ್ನ ನೆನಪಲ್ಲಿ ಗಂಟಲಲ್ಲಿ ಮುದ್ದೆ,
ನಿದ್ರಾದೇವಿಯೂ ಮುನಿಸಿಕೊಂಡತಿದೆ ಬರುತಿಲ್ಲ ನನಗೆ ನಿದ್ದೆ.

ಸಹಿಸಲಾಗದೆ ಬೇಸತ್ತು ನಿನ್ನೀ ಹುಸಿಮುನಿಸು,
ಅಪ್ಪಿ ತಪ್ಪಿ ನಿದ್ದೆ ಬಂದರೂ ಬೀಳ್ತಿಲ್ಲ ಸಿಹಿಗನಸು.

ಬಹಳ ದಿನಗಳ ನಂತರ ಬಂದ ನಿನ್ನ ಕರೆಯಿಂದ ನನ್ನ ನರನಾಡಿಗಳಲ್ಲೇನೋ ಕಂಪನ,
ಆದರೆ ಕರೆ ಕಡಿತಗೊಳಿಸಿದ್ದೇಕೆ ನಾನನುಭವಿಸುವ ಮೊದಲೇ ನಿನ್ನ ಸ್ವರದ ಇಂಪನ.

ನಂಗೊತ್ತಿತ್ತು ಕಣೆ ನನ್ಬಿಟ್ಟು ನೀನು ತುಂಬಾ ದಿನ ಒಂಟಿಯಾಗಿರಲ್ಲ,
ಪುನಃ ಬರಬೇಡ ನೀನು, ಬಂದೋದರೆ ಇನ್ನೊಮ್ಮೆ ಅಳಲು ನನ್ನಲ್ಲಿ ಕಣ್ಣೀರಿಲ್ಲ.

-
ಹರ್ಷ ಹೆಮ್ಮಾಡಿ.

No comments:

Post a Comment