ದ್ವಂಧ್ವದ
ಬಾಳು ಇದು ನಮ್ಮ ಜೊತೆಗೇ ಮಾಡುತ್ತೆ ಕುಸ್ತಿ,
ಬೇಕೆಂದಾಗ ಯಾವುದೂ ಸಿಗದೇ ಬೇಡವೆಂದಾಗ ಸಿಗೋದೇ ಜಾಸ್ತಿ.
ನಿನ್ನೆ
ರಾತ್ರಿ ಬೇಗ ಮಲಗಿದ್ದೆ ಆದರೆ ಕಣ್ಣಿಗೆ ನಿದ್ದೆ ಹತ್ತಿದ್ದು ಮಾತ್ರ ಬೆಳಗಿನ ಜಾವ ೨ ಗಂಟೆಗೆ,
ಬೆಳಿಗ್ಗೆ ಬೇಗ ಏಳಬೇಕೆಂದರೆ ನಿದ್ದೆ ನನ್ನೊಂದಿಗೆ ನಿಂತಿತ್ತು ತಂಟೆಗೆ.
ಇದೊಂಥರಾ
ತುಂಬಾ ಮೋಸ ಮತ್ತು ಕಹಿ ಅಲ್ವಾ,
ಮಧುಮೇಹಿ
ಬಾಯಿಗೆ ತುರುಕಿದಂತೆ ಸಿಹಿ ಹಲ್ವಾ.
ಅದಕ್ಕೇ
ಭಟ್ರು ಹೇಳಿರೋದು ಬಾಳು ಅಂದ್ರೆ ಏನು ಅಂತ ಹೇಳಲೇ,
ಮೆಡಿಸಿನ್ನೇ
ಇಲ್ದೇ ಇರೋ ಕಾಯಿಲೆ.
- ಹರ್ಷ
ಹೆಮ್ಮಾಡಿ.
No comments:
Post a Comment